ಇದು ಬೆಂಗಳೂರಿನ ಬೇಗೂರಿನಲ್ಲಿ ೯ನೇ ಶತಮಾನದಲ್ಲಿ ಕೆತ್ತಿಸಿದ ಕಲ್ಲುಬರಹ. ಬೇಗೂರು ನಾಗತರ ತುಂಬೆಪಡಿ ವೀರಗಲ್ಲು ಬೇಗೂರು ಬೆಂಗಳೂರು ಶಿಲಾಶಾಸನವೆಂದೇ ಪ್ರಸಿದ್ದಿಯಾಗಿದೆ. ಈ ಶಾಸನವು ಸುಮಾರು ಕ್ರಿ.ಶ ೮೯೦ರಲ್ಲಿ ಸ್ಥಾಪನೆಯಾಯಿತು. ಇದು ಈ ಪ್ರಾಂತ್ಯದ ನಾಗತಾರನ ಮಗ ಬುಟ್ಟಣಶೆಟ್ಟಿ ಎಂಬುವವನು ಕಾಳಗದಲ್ಲಿ ಹೋರಾಡಿ ಮಡಿದ ನೆನಪಿಗಾಗಿ ಕೆತ್ತಿದ ವೀರಗಲ್ಲುಶಾಸನ. ಇದರಲ್ಲಿ ’ಬೆಂಗಳೂರು’ ಎಂಬ ಪದದ ಉಲ್ಲೇಖವಾಗಿದ್ದು ಬೆಂಗಳೂರು ೯ನೇ ಶತಮಾನದಲ್ಲಿಯೇ ಇತ್ತು ಎಂಬುದನ್ನೂ ತಿಳಿಸುತ್ತದೆ. == ಇತಿಹಾಸ == ಕ್ರಿ.ಶ. ೮೯೦ರಲ್ಲಿ ಗಂಗರು ಮತ್ತು ನೊಣಂಬರ ನಡುವೆ ನಡೆದ ಕಾಳಗದಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ ಎರೆಯಪ್ಪ, ಮಹೇಂದ್ರನ ಮಗನಾದ ಅಯ್ಯಪ್ಪ ವಿರುದ್ಧ ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ. ಅದರ ನಂತರ ಈ ವೀರಕಲ್ಲನ್ನು ಬೇಗೂರು ದೇವಸ್ಥಾನದಲ್ಲಿ ಕೆತ್ತಿಸಿ ವರ್ಣಿಸಲಾಗಿದೆ. == ಶಾಸನದ ಬರಹ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ. == ಅರ್ಥ ವಿವರಣೆ == - , - , , - , , - :- - -, , , , . , , , , , . :- , , -, -, , , --, , , , . , , []. . == ವೀರಗಲ್ಲು ಈಗ ಇರುವ ಸ್ಥಳ == ಪ್ರಸ್ತುತ ಹಳೆಯ ಪಳೆಯುಳಿಕೆಗಳ ಸಂರಕ್ಞಣೆ ಮತ್ತು ಸಂಗ್ರಹದ ದೃಷ್ಠಿಯಿಂದ ವೀರಗಲ್ಲು ಮತ್ತು ಇತರ ೧೪ ಕಲ್ಲುಗಳನ್ನು ೨೦೧೫ ರಲ್ಲಿ ಬೆಂಗಳೂರಿನಲ್ಲಿ ಇರುವ ಬೆಂಗಳೂರು ಮ್ಯೂಸಿಯಂಗೆ ಸಾಗಿಲಾಯಿತು. == ಉಲ್ಲೇಖಗಳು == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018 ,